ದಾಸಯ್ಯ
ಜೋಳಿಗೆ ಹಿಡಿದು ಹೊರಟ ದಾಸಯ್ಯ,
ಕನ್ನಡ ಕಾಣಿಕೆ
ಕೇಳಲೆಂದು,
ಹೊಟ್ಟೆ ಪಾಡಿಗಲ್ಲ,
ಹಿಟ್ಟು ತಿನ್ನಲಲ್ಲ,
ಗುರು ಸ್ಮರಣೆ ಮಾಡಲೆಂದು.
ಜೋಳಿಗೆ ಹಿಡಿದು ಹೊರಟ ದಾಸಯ್ಯ,
ಕನ್ನಡ ಕಾಣಿಕೆ ಕೇಳಲೆಂದು.
ಮೈ ತುಂಬ ಕಾಯಿಲೆ ಇತ್ತು,
ಕೈ ತುಂಬ ಕೆಲಸ ಇತ್ತು,
ಆದರು ಅಲೆದ ಊರಲೆಲ್ಲ.
ಜೋಳಿಗೆ ಹಿಡಿದು ಹೊರಟ ದಾಸಯ್ಯ,
ಕನ್ನಡ ಕಾಣಿಕೆ ಕೇಳಲೆಂದು.
ಶಿಷ್ಯರ ಪಡೆಯನೆ ನಿರ್ಮಿಸಿದ,
ಕನ್ನಡ ಕೃಷಿಯಲಿ ತೊಡಗಿಸಿದ,
ಗುರು ಸ್ಮರಣೆಗೆ ಜೀವವನರ್ಪಿಸಿದ.
ಜೋಳಿಗೆ ಹಿಡಿದು ಹೊರಟ ದಾಸಯ್ಯ,
ಕನ್ನಡ ಕಾಣಿಕೆ ಕೇಳಲೆಂದು.
ಶ್ರೀ ಭವನದ ಕನಸ ಕಂಡನನವರತ,
ಕಂಡ ಕಂಡವರಿಗೆ ಕೈ ಮುಗಿಯುತ,
ತನ್ನಾರೋಗ್ಯವ ಕಡೆಗಣಿಸುತ.
ಜೋಳಿಗೆ ಹಿಡಿದು ಹೊರಟ ದಾಸಯ್ಯ,
ಕನ್ನಡ ಕಾಣಿಕೆ ಕೇಳಲೆಂದು.
ಭವನದ ಕನಸು ನನಸಾಗುವುದರಲೇ,
ಹಿಂಡಿತವನ ಜೀವವ ಹಳೆ ಖಾಯಿಲೆ,
ಕಂಗಳ ಮುಚ್ಚಿದ ಗುರುವ ನೆನೆಯುತಲೇ.
ಜೋಳಿಗೆ ಹಿಡಿದು ಹೊರಟ ದಾಸಯ್ಯ,
ಕನ್ನಡ ಕಾಣಿಕೆ ಕೇಳಲೆಂದು.
ಇಂದವನ ಜನ್ಮ ಶತಾಬ್ದಿಯ್ಯ,
ನಮ್ಮೊಡನಿಲ್ಲ ದಾಸಯ್ಯ,
ಅವನ ನೆನಪೆಮ್ಮನು ಕಾಡುವುದಯ್ಯ.
ಜೋಳಿಗೆ ಹಿಡಿದು ಹೊರಟ ದಾಸಯ್ಯ,
ಕನ್ನಡ ಕಾಣಿಕೆ ಕೇಳಲೆಂದು.
ಸೀ.ತಿ.ರಾಧಾಕೃಷ್ಣ
Thursday, July 9, 2009
Subscribe to:
Posts (Atom)